ಚಿಕ್ಕ ದೇವಸ್ಥಾನದಲ್ಲಿನ ಶ್ರೀ ಚನ್ನಬಸವೇಶ್ವರ ಉತ್ಸವ ಮೂರ್ತಿ ಇದೆ. ಜೊತೆಗೆ ಶ್ರೀ ಮಲ್ಲಿಕಾರ್ಜುನಸ್ವಾಮಿ ಮತ್ತು ಭ್ರಮರಾಂಭ ದೇವತೆಯ ಉತ್ಸವ ಮೂರ್ತಿಗಳು ಇವೆ. ಇದಕ್ಕೆ ನಿತ್ಯ ಬೆಳಿಗ್ಗೆ 6.00 ಗಂಟೆಗೆ ಮುಂಜಾನೆ ಪೂಜೆ, ನೈವೇದ್ಯ ನಡೆಯುತ್ತದೆ. 10.00 ಗಂಟೆಗೆ ರುದ್ರಾಭಿಷೇಕ, ಎಡೆಸೇವೆ, ನೈವೇದ್ಯ, ಮಹಾಮಂಗಳಾರತಿ ಎಲ್ಲಾ ನಡೆಯುತ್ತದೆ. ನೆರೆದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯುತ್ತದೆ.
ಊರಿನ ಜನರು ಇಲ್ಲಿಗೆ ಪ್ರತಿ ಬೆಳಿಗ್ಗೆ ಬೆಳೆದ ಧಾನ್ಯಗಳನ್ನು ನೈವೇದ್ಯದ ರೂಪದಲ್ಲಿ ದೇವರಿಗೆ ಕೊಟ್ಟು ನಂತರ ತಾವು ಬಳಸುತ್ತಾರೆ. ಹಾಗೆ ಹೊಸ ದನ ಅಥವಾ ಕರುಗಳ ಜನನ ಆದಾಗ ಅದರ ಹಾಲಿನ ಗಿಣ್ಣು ನೈವೇದ್ಯಕ್ಕೆ ಕೊಡುವುದು ಮತ್ತು ಯಾವುದೇ ಹೊಸ ಕೆಲಸಗಳಿಗೆ ಕೈಹಾಕುವ ಮುಂಚೆ ದೇವರಲ್ಲಿ ಅರ್ಪಣೆ ಮಾಡಿಕೊಂಡು ನಂತರ ಹೊರಡುತ್ತಾರೆ.