ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ ಕ್ಷೇತ್ರ, ಗುಬ್ಬಿ, ತುಮಕೂರು ಜಿಲ್ಲೆ

ಶ್ರೀ ಚನ್ನಬಸವೇಶ್ವರ ಸ್ವಾಮಿ


ಸಚ್ಚಿದಾನಂದರೂಪಂ ತಂ ನಿರಾಭಾರಿ ಗುರೂತ್ತಮಂ
ಗುಬ್ಬೀ ನಗರವಾಸ್ತವ್ಯಂ ಶ್ರೀ ಚನ್ನಬಸವೇಶಂ

ವಾಣಿಜ್ಯಪುರಮಧ್ಯಸ್ಥ ಶೂನ್ಯ ಸಿಂಹಾಸನಾಧಿಪಂ
ಜಗದ್ಗುರುವರಂ ವಂದೇ ಭುಕ್ತಿಮುಕ್ತಿ ಪ್ರದಾಯಕಂ

ಶ್ರೀಚನ್ನಬಸವೇಶಾಖ್ಯಂ ಷಟ್ಸ್ತಲಜ್ಞಾನ ಭಾಸ್ಕರಂ
ಭಜಾಮಿ ಮನಸಾ ನಿತ್ಯಂ ಸರ್ವಲೋಕ ನಮಸ್ಕøತಂ

ಯೋಗ ಸಾಗರರೂಪಾಯ ಷಟ್ಸ್ಥಲ ಜ್ಞಾನ ಮೂರ್ತಯೇ
ಭಕ್ತಮಂದಾರ ರೂಪಾಯ ನಮಃ ಶಂಕರರೂಪಿಣೇ

ಗುಬ್ಬೀಪುರವರಾಧೀಶ ಸರ್ವಶಕ್ತ ಜಗದ್ಗುರೋ
ಗೋಸಲಾಖ್ಯ ಮಹಾವಂಶ ರತ್ನದೀಪ ನಮೋಸ್ತುತೇ

-ಪದ್ಮಶ್ರೀ ಬಿ.ಶಿವಮೂರ್ತಿಶಾಸ್ತ್ರಿಗಳು.

Read more

ಹಬ್ಬಗಳು ಮತ್ತು ಉತ್ಸವಗಳು

ಮುಖ್ಯದೇವಸ್ಥಾನದಲ್ಲಿ ದಿನನಿತ್ಯದ ಪೂಜೆಗಳು,

ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ ಆಗ್ರೋದಕ (ತುಂಬಿದ ಕೊಡದ ನೀರು) ತಂದು ಗದ್ದಿಗೆಯನ್ನು ಸ್ವಚ್ಛ ಮಾಡಿ, ಷೋಡೋಪಚಾರ ಪೂಜೆ, ಅಷ್ಟೋತ್ತರ, ಎಡೆಸೇವೆ

Read more

ಇತರ ದೇವಸ್ಥಾನದಲ್ಲಿನ ಪೂಜೆಗಳು

ಚಿಕ್ಕ ದೇವಸ್ಥಾನದಲ್ಲಿನ ಶ್ರೀ ಚನ್ನಬಸವೇಶ್ವರ ಉತ್ಸವ ಮೂರ್ತಿ ಇದೆ. ಜೊತೆಗೆ ಶ್ರೀ ಮಲ್ಲಿಕಾರ್ಜುನಸ್ವಾಮಿ ಮತ್ತು ಭ್ರಮರಾಂಭ ದೇವತೆಯ ಉತ್ಸವ ಮೂರ್ತಿಗಳು ಇವೆ. ಇದಕ್ಕೆ ನಿತ್ಯ ಬೆಳಿಗ್ಗೆ 6.00 ಗಂಟೆಗೆ ಮುಂಜಾನೆ ಪೂಜೆ

Read more

ವರ್ಷದ ಹಬ್ಬಗಳು

ಪ್ರತಿ ವರ್ಷ ಜನವರಿ 14 ಅಥವಾ 15 ರಂದು ಬರುವ ಸಂಕ್ರಾಂತಿ ಹಬ್ಬಕ್ಕೆ ಇಲ್ಲಿ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಬೆಳಿಗ್ಗೆಯಿಂದ ಎಲ್ಲ ದೈನಂದಿಕ ಪೂಜೆಗಳನ್ನು ಮುಗಿಸಿ ನಂತರ ಚಿಕ್ಕ ದೇವಸ್ಥಾನದಲ್ಲಿ ಇರುವ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು(ಶ್ರೀ ಬಸವೇಶ್ವರರನ್ನು, ಶ್ರೀ ಮಲ್ಲಿಕಾರ್ಜುನಸ್ವಾಮಿ ಮತ್ತು ಭ್ರಮರಾಂಭ ದೇವಿ)

Read more

ಕರ್ನಾಟಕ ಸರ್ಕಾರದ ಆದೇಶದಂತೆ ಸೇವಾರ್ಥ ವಿವರ

ಕ್ರ.ಸಂ.ಸೇವೆಗಳು ಮೊತ್ತ
01ಏಕಾದಶ ರುದ್ರಾಭಿಷೇಕ 500/-
02ರುದ್ರಾಭಿಷೇಕ100/-
03ಸಹಸ್ರನಾಮ50/-
04ಪಂಚಾಮೃತ ಅಭಿಷೇಕ50/-
05ಅಷ್ಟೋತ್ತರ20/-
06ರಾಜೋಪಚಾರ150/-
07ಪ್ರಾಕಾರೋತ್ಸವ100/-
08ತೆಂಗಿನಕಾಯಿ ಮಂಗಳಾರತಿ5/-
09ದ್ವಿಚಕ್ರ ಮತ್ತು ತ್ರಿಚಕ್ರ ಹೊಸ ವಾಹನ50/-
10ದ್ವಿಚಕ್ರ ಮತ್ತು ತ್ರಿಚಕ್ರ ಹಳೆ ವಾಹನ20/-
11ನಾಲ್ಕು ಚಕ್ರ ಮೇಲ್ಪಟ್ಟು ಹಳೆ ವಾಹನ100/-
12ನಾಲ್ಕು ಚಕ್ರ ಮೇಲ್ಪಟ್ಟು ಹೊಸ ವಾಹನ200/-
13ಮಂಡೆ30/-
14ನೀರು ಹಾಕುವುದು20/-
15ಚಿಕ್ಕ ಉತ್ಸವ200/-
16ದೊಡ್ಡ ಉತ್ಸವ250/-